Raga: Nadanaamakriya
Taala: Aadi
Composition: Purandaradasa


Scale:
ಸ ರಿ1 ಗ3 ಮ1 ಪ ದ1 ನಿ3  || ನಿ3 ದ1 ಪ ಮ1 ಗ3 ರಿ1 ಸ ನಿ3
s r1 g3 m1 p d1 n3 || n3 d1 p m1 g3 r1 s n3


||ಪಲ್ಲವಿ||
ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ||

||ಚರಣ 1||
ದುರು ಬುದ್ಧಿಗಳನೆಲ್ಲ ಬಿಡಿಸೋ ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೋಡಿಸೋ||
ಚರಣ ಸೇವೆ ಎನಗೆ ಕೊಡಿಸೋ ಅಭಯ ಕರ ಪುಷ್ಪವನೆನ್ನ ಶಿರದಲ್ಲಿ ಮುಡಿಸೋ||

||ಚರಣ 2||
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ ನಡಿಗೆರಗುವೆನೈಯ್ಯಾ ಅನುದಿನ ಪಾಡಿ||
ಕಡೆಗಣ್ಣೆ ಲೇಕೆನ್ನ ನೋಡಿ ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ||

||ಚರಣ 3||
ಮೊರೆಹೊಕ್ಕವರ ಕಾವ ಬಿರುದು ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು||
ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠಲ ಎನ್ನನು ಪೊರೆದು||


||Pallavi||
Daasana maadiko yenna swami saasira naamada venkataramana||

||Charana 1||
Duru budhigalanella bidiso ninna karuna kavachavenna haranakke thodiso||
Charana seeve yenage kodiso abhaya kara pushpavanenna shiradalli mudiso||

||Charana 2||
Druda bhakthi ninnalli beedi naa nadigeraguvenaiyya anudina paadi||
Kadeganne leekenna nodi biduve kodu ninna dhyaanava mana shuchi maadi||

||Charana 3||
Morehokkavara kaava birudu yenna mareyade rakshane maadayya poredu||
Durithagalellava tharidu siri purandara vittala yennannu poredu||


 

Advertisements