Raga: Madhyamavathi
Taala: Mishrachapu
Composition: Kanakadasa


Scale:
ಸ ರಿ2 ಮ1 ಪ ನಿ2 ಸ|| ಸ ನಿ2 ಪ ಮ1 ರಿ2 ಸ
s r2 m1 p n2 S || S n2 p m1 r2 s


||ಪಲ್ಲವಿ||
ಕುಲ ಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ||

||ಚರಣ 1||
ಕಸದೊಳು ತಾವರೆ ಪುಟ್ಟಲು ಅದತಂದು ಬಿಸಜನಾಭನಿಗರ್ಪಿಸಲಿಲ್ಲವೇ||
ಹಸುವಿನ ಮಾಂಸದೊಳುತ್ಪತಿ ಕ್ಷೀರವು ವಾಸುದೆಯೊಳಗೆ ಭೂಸುರರುಣ್ಣಲಿಲ್ಲವೇ||

||ಚರಣ 2||
ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತುರಿ ತೆಗೆದು ಪೂಸುವರು ಭೂಸುರರೆಲ್ಲರೂ||
ಬಗೆಯಿಂದ ನಾರಾಯಣನ್ಯಾವ ಕುಲದವ ಅಗಜ ವಲ್ಲಭನ್ಯಾತರ ಕುಲದವನು||

||ಚರಣ 3||
ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇನದ್ರಿಯಗಳ ಕುಲ ಪೇಳಿರಯ್ಯ||
ಆತ್ಮ್ಯಾಂತರಾತ್ಮಾ ನೆಲೆಯಾದಿ ಕೇಶವ ಆತನೊಲಿದ ಮೇಲೆ ಯಾತರ ಕುಲವೈಯ್ಯ||


||Pallavi||
Kula kula kulavennuthiharu kulavyaavudu sathya sukhavulla janarige||

||Charana 1||
Kasadolu thaavare puttalu adathandu bisajanaabhanigarpisalillave||
Hasuvina maamsadoluthpathi ksheeravu vasudeyolage bhusurarunnalillave||

||Charana 2||
Mrugagala maiyalli puttida kasthuri thegedu poosuvaru bhusurarellaru||
Bageyinda narayananyava kuladava agaja vallabhanyathara kuladavanu||

||Charana 3||
Aathma yaava kula jeeva yaava kula thathwendriyagala kula pelirayya||
Aathmantharaathma neleyaadi keshava aathanolida mele yaathara kulavaiyya||


 

Advertisements