Raga: Shanmukhapriya
Taala: Aadi
Composer: Purandaradasa


Scale:
ಸ ರಿ2 ಗ2 ಮ2 ಪ ದ1 ನಿ2 || ನಿ2 ದ1 ಪ ಮ2 ಗ2 ರಿ2 ಸ
s r2 g2 m2 p d1 n2 S|| S n2 d1 p m2 g2 r2 s


||ಪಲ್ಲವಿ||
ಜಗನ್ಮೋಹನನೇ ಕೃಷ್ಣ|| ಜಗವನ್ನು ಪಾಲಿಪೆನೆ ಕೃಷ್ಣ||

||ಚರಣ 1||
ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನ್ನೆಲ್ಲ ಬಾಯಲಿ ತೋರಿದೆ||
ಆಕಳ ಕಾಯುವ ಚಿನ್ನನೆಂದೆನಿಸಿದೆ ಈ ಕುಟಿಲವನ್ನೆಲ್ಲ ಎಲ್ಲಿ ಕಲಿತ್ಯೋ ರಂಗ||

||ಚರಣ 2||
ಎಂದೆಂದಿಗೂ ನಿನ್ನ ಗುಣಗಳ ಪೊಗಳುವೆ ಇಂದ್ರಾದಿಗಳಿಗೂ ಅಳವಲ್ಲ||
ಮಂದರೋಧಾರನೇ ಪುರಂದರ ವಿಠ್ಠಲನೇ ಒಂದೊಂದಾಟವ ಎಲ್ಲಿ ಕಲಿತ್ಯೋ ರಂಗ||


||Pallavi||
Jaganmohanane krishna|| jagavanu paalipane krishna||

||Charana 1||
Lokadolage nee shishuvaagi murlokavanella baayali thoride||
Aakala kaayuva chinnanendeniside ee kutilavanella yelli kalithyo ranga||

||Charana 2||
Yendendigu ninna gunagala pogaluve indraadigaligu alavalla||
Mandarodharane purandara vittalane ondondaatava yelli kalithyo ranga||


 

Advertisements