Raga: Mohana
Taala: Aadi
Composer: Kanakadasa


Scale:
ಸ ರಿ2 ಗ3 ಪ ದ2 || ದ2 ಪ ಗ3 ರಿ2 ಸ
s r2 g3 p d2 S|| S d2 p g3 r2 s


||ಪಲ್ಲವಿ||
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ||

||ಅನುಪಲ್ಲವಿ||
ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ||

||ಚರಣ 1||
ಮೊರೆಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನ್ಯಾರಮ್ಮ||
ಮೂರೂ ಕಣ್ಣಿನ ಸುತ ಮುರಿದಿಟ್ಟ ಚಂದ್ರನ ಧೀರತ ಗಣನಾಥನೇ ಅಮ್ಮಯ್ಯ ||

||ಚರಣ 2||
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣದ ದಿಟ್ಟತನಿವನ್ಯಾರಮ್ಮ||
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ಅಮ್ಮಯ್ಯ||

||ಚರಣ 3||
ರಾಶಿ ವಿಧ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ||
ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವ ದಾಸ ಕಣೆ ಅಮ್ಮಯ್ಯ||


||Pallavi||
Nammamma sharade uma maheshwari nimmolagihanyaramma||

||Anupallavi||
Kammagolana vairi suthanaada sondila hemmeya gananaathane||

||Charana 1||
Morekappina bhava moradagalada kivi koredadeyanyaramma||
Muru kannina sutha muriditta chandrana dhiratha gananaathane ammaiyya||

||Charana 2||
Utta dattiyu bigidutta challanada dittathanivanyaramma||
Pattada raani parvathiya kumaranu hotteya gananaathane ammaiyya||

||Charana 3||
Raashi vidhyeya balla ramani hambalanolla bhashiganivanyaramma||
Lesaagi sujanara salahuva neleyaadi keshava dasa kane ammaiyya||


 

Advertisements