ರಾಗ :ತಿಲಂಗ್
ತಾಳ: ರೂಪಕ ತಾಳ
ರಚನೆ: ಪುರಂದರ ದಾಸರು

||ಪಲ್ಲವಿ||
ರಾಮ ರಾಮ ರಾಮ ರಾಮ ರಾಮ ಎನಿರೋ ಸೀತಾ||
||ಅನುಪಲ್ಲವಿ||
ನೇಮದಿಂದ ‌‍‌‍‌ಭಜಿಸುವವರ ಕಾಮಿತಗಳ ಕೊಡುವ ನಾಮ||
||ಚರಣ 1||
ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು||
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ||
||ಚರಣ 2||
ಬೃಷ್ಟ ಜನ್ಮದಲಿ ಬಂದು ದುಷ್ಟಕರ್ಮಗಳನೆ ಮಾಡಿ||
ದೇಹ ಬಿಟ್ಟು ಹೋಗ್ವ ಸಮಯ ಪುರಂದರ ವಿಠಲ ನಾಮ ಒದಗದಯ್ಯ||

Advertisements