Raga: Ragamalike
Tala: Aadi
Composer: Purandaradasa


ರಾಗ: ಶುಭ ಪಂತುವರಾಳಿ
ಕಾವದೈವವು ನೀನೇ ಕೊಲುವ ದೈವವು ನೀನೇ||
ಕೈವಲ್ಯ ಫಲದಾತ ಕೇಶವನೆ ರಘುನಾತ||
ಯಾವ ದೈವಕ್ಕು ಈ ವೈಭವವು ಕಾಣೆ||
ರಾವಣಾಂತಕ ಸ್ವಾಮಿ ಶ್ರೀ ಪುರಂದರ ವಿಠಲ||

||ಪಲ್ಲವಿ||
ಯಾಕೆ ನಿರ್ದಯನಾದೆನೋ ಹರಿಯೇ||
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ||

||ಚರಣ 1||
ಸಿರಿಗೆ ಬೆಳದು ಮುನ್ನ ಸೆರಗನ್ನು ಧರಿಸಿದ್ದಿ||
ಗರುಡನ ಮೇಲೇರದಿ ಗಮನವಾದಿ||
ಭರದಿಂದ ನೀ ಬಂದು ಆಗೆನ್ನ ಸಲಹಿದೆ||
ಕರಿರಾಜ ಎಷ್ಟು ಕೊಟ್ಟನೋ ಕೇಳೋ ಹರಿಯೆ||

||ಚರಣ 2||
ರಾಗ: ಅಭೋಗಿ
ಕಂಗೆಟ್ಟು ಕಂಬದಲಿ ನರಹರಿಯೇ ನೀ ಬಂದು||
ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ||
ಮಂಗಳ ಪಡವಿತ್ತು ಆಗೆನ್ನ ಸಲಹಿದೆ||
ಬಂಗಾರ ಎಷ್ಟುಕೊಟ್ಟ ಪೇಳೋ ಹರಿಯೆ||

||ಚರಣ 3||
ರಾಗ:ಅಭೇರಿ
ಅಜಾಮಿಳನು ಅಣ್ಣನೋ ವಿಭೀಷಣನು ತಮ್ಮನೋ ||
ನಿಜಾರುಕ್ಮಾಗಂದ ನಿನ್ನ ಮೊಮ್ಮಗನೋ||
ಅವರೆಲ್ಲ ಹಿತರೇನೋ ನಾನಿನಗೆ ಅನ್ಯನೋ||
ನ್ಯಾಯವಲ್ಲವೇ ತಂದೆ ಪುರಂದರ ವಿಠ್ಠಲ||


Raga: Shubha panthuvaraali
Kaavadaivavu neene koluva daivavu neene||
Kaivalya paladaatha keshavane raghunaatha||
Yaava daivakkuu ee vaibhavavu kaane||
raavanaathaka swami shree purandara vittala||

||Pallavi||
Yaake nirdayanaadeyo hariye||
Shrikaantha yenna mele yellashtu dayavilla||

||Charana 1||
Sirige beleda munna seraganu dharisiddi||
Garudana meeleeradi gamanavaadi||
Bharadinda nee bandu aagenna salahide||
kariraaja yeshtu kottanoo kelo hariye||

||Charana 2||
Raga: Abhogi
Kangettu kambadalli narahariye nee bandu||
Hingade prahladanna appikondi||
Mangala padavithu aagenna salahide||
Bangara yeshtu kottanoo pelu hariyee||

||Charana 3||
Raga:Abheri
Ajaamilanu annanoo vibhiishananu thammanoo||
Nijarukmaaganda ninna mommaganoo||
Avarella hitharenoo naaninage anyanoo||
Nyayavallave thande purandara vittala||


 

Advertisements