Raga: Abheri
Tala: Aadi


Scale:
s g2 m1 p n2 S
S n2 d2 p m1 g2 r2 s
ಸ ಗ2 ಮ1 ಪ ನಿ2 ಸ
ಸ ನಿ2 ದ2 ಪ ಮ1 ಗ2 ರಿ2 ಸ


||ಪಲ್ಲವಿ||
ನೀಡು ವರವ ಮಾತೆ ವರ ಲಕ್ಷ್ಮಿ||
ಬೇಡುವೆನು ಕಾಪಾಡೆ ಮಹಾಲಕ್ಷ್ಮಿ||

||ಚರಣ 1||
ಚಿತ್ತವು ನೆಲಸಲಿ ನಿನ್ನ ಪದದೊಳು||
ಇತ್ತು ಪೊರೆ ಸೌಭಾಗ್ಯವೆಮ್ಮೊಳು||
ಚಿತ್ತ ಜನಯ್ಯನ ಅರಸಿ ಕೃಪೆಯೊಳು||
ನಿತ್ಯ ನೆಲೆಸು ನೀ ನಮ್ಮ ಗೃಹದೊಳು||

||ಚರಣ 2||
ಶುಭವಣಿಯೇ ನುಡಿಸೆಮ್ಮ ವದನದಿ||
ಸುಖಶಾಂತಿ ಕರುಣಿಸು ಎಮ್ಮ ಗೃಹದಿ||
ಇಭಗಮನೇ ಶುಭ ಇಂದಿವರಾಕ್ಷಿ||
ಅಭುಜಲಯೇ ಕೊಲ್ಲಾಪುರವಾಸಿ||

||ಚರಣ 3||
ಪತಿ ಸೇವೆ ಸತತವೂಗೈನಂತೆ||
ಪತಿಯೊಳು ಅತಿಪ್ರೇಮದಿ ಬಾಲ್ವನಂತೆ||
ಪತಿಯಂತರ್ಗತ ಮೂಲ ನಾರಾಯಣ||
ಸತತವೆಮ್ಮೊಳು ಕರುಣೆಗೈವಂತೆ||


||Pallavi||
Needu varava mathe vara lakshmi||
Beduvenu kapade mahalakshmi||

||Charana 1||
Chithavu nelasali ninna padadolu||
Ithu pore sowbhagyavemmolu||
Chitha janayyana arasi krupeyolu||
Nithya nelesu ni namma gruhadolu||

||Charana 2||
Shubhavaniye nudesemma vadanadi||
Sukhashanthi karunisu yemma gruhadi||
Ibhagamane shubha indivarakshi||
Abhujalaye kollapuravasi||

||Charana 3||
Pathi seve satatavugainanthe||
Pathiyolu athipremadi balwanthe||
Pathiyanthargatha mula narayana||
Sathathavemmolu karunegaivanthe||


 

Advertisements