Raga: Saramathi
Tala: Khandachapu


Scale:
s r2 g2 m1 p d1 n2 S
S n2 d1 m1 g2 s
ಸ ರಿ2 ಗ2 ಮ1 ಪ ದ1 ನಿ2 ಸ
ಸ ನಿ2 ದ1 ಮ1 ಗ2 ಸ


||ಪಲ್ಲವಿ||
ಲೋಕ ಜನನಿಯೇ ತಾಯೆ ಕ್ಷೀರ ಸಾಗರ ಕನ್ಯೆ||
ಶ್ರೀ ಮಹಾಲಕ್ಷ್ಮಿಯೇ ಸರ್ವ ಮನ್ಯೇ||

||ಚರಣ 1||
ನಿನ್ನ ಕೃಪೆಯೊಂದಿರಲು ಲೋಕವೇ ನಲಿಯುವುದು||
ಸರ್ವ ಸಂಪದಗಳಿಗೆ ಒಡತಿ ನೀನು||
ನೀನು ಮುನಿದರೆ ಸರ್ವ ಲೋಕವೇ ನಲುಗುವುದು||
ನಿನ್ನ ಆಟಿಕೆಯಂತೆ ಲೋಕವೆಲ್ಲ||

||ಚರಣ 2||
ನಿನ್ನ ಸುತ್ತಲೂ ಆಶೆ ಆಮಿಷದ ಬಲೆಯಿಹುದು||
ಮಾನವತೆ ಮರೆಯಿಸುವ ಪಾಶವಿಹುದು||
ಹೆದರುವೆನು ತಾಯೆ ತವ ಮೋಹಕದ ಹಾಸಕ್ಕೆ||
ತಳ್ಳದಿರು ನಾಶದೆಡೆ ಕರುಣೆತೋರು||

||ಚರಣ 3||
ಎಲ್ಲವೂ ನಿನ್ನದಿರೆ ನಾನು ಕೊಡಲೇನಿಹುದು||
ನಾನೇ ನಿನ್ನವಳಲ್ತೆ ಪದ್ಮಾಲಯೇ||
ಅದಕೆ ಮಾನಸ ಪೂಜೆ ಅರ್ಪಿಸುವೆ ಭಾರ್ಗವಿಯೇ||
ಶ್ರೀ ಹರಿಯ ಪ್ರಿಯೆ ನೀನು ಸಲಹು ತಾಯೆ||


||Pallavi||
Loka jananiye thaye ksheera sagara kanye||
Shree mahalakshmiye sarva manye||

||Charana 1||
Ninna krupeyondiralu lokave naliyuvudu||
Sarva sampadagalige odathi neenu||
Neenu munidare sarva lokave naluguvudu||
Ninna aatikeyanthe lokavella||

||Charana 2||
Ninna suthalu aashe aamishada baleyihudu||
Manavathe mareyisuva pashavihudu||
Hedaruvenu thaye thava mohakada hasakke||
Thalladiru nashadede karunethoru||

||Charana 3||
Yellavu ninndire naanu kodalenihudu||
Naane ninnavalalthe padmalaye||
Adake manasa puje arpisuve bhargaviye||
Shree hariya priye neenu salahu thaye||


 

Advertisements