Raga: Ragamalike
Tala: Aadi
ರಾಗ: ಆನಂದಭೈರವಿ
||ಪಲ್ಲವಿ||
ಪರಶಿವ ಸತಿ ನಿನ್ನ ಪಾದವ ನಂಬಿದೆ||
ಕರುಣಾದಿ ಕಾಪಾಡಮ್ಮಾ ದೇವಿ||
||ಅನುಪಲ್ಲವಿ||
ಏನಿದು ಈ ಮೌನ ದೀನಳ ಪೊರೆಯಳು||
ಅರಿಯದ ನಾ ನಿನ್ನ ಏನೆಂದು ಪೋಗಳಲಮ್ಮ||
ರಾಗ: ಕಲ್ಯಾಣಿ
||ಚರಣ 1||
ಎಲ್ಲಾ ದುರಿತಗಳು ಗಿರಿಗಳಂತಿದ್ದರು||
ಹುಲ್ಲಾಗುವುದು ನಿನ್ನ ಕಣ್ಣೋಟವೇ||
ಕಲ್ಯಾಣಿಯೇ ಕರುಣಾ ಸಾಗರಿಯೇ ಶಿವೆಯೇ||
ಉಲ್ಲಸಿಯೇ ಉಮೇ ನಿನ್ನ ನಂಬಿದೆ ನಮ್ಮ||
ರಾಗ: ಬಾಗೇಶ್ರೀ
||ಚರಣ 2||
ನಾಗೇಶ್ವರಿ ಎಂದು ನಮಿಸುವೆ ತಾಯೆ||
ಭಾಗೇಶ್ವರಿ ತಾಯೆ ಬಂದಿಂದು ಕೃಪೆ ತೋರು||
ಭಾಗೇಶ್ವರಿ ತಾಯೆ ಪಾರ್ವತಿಯೇ ಅಮ್ಮ||
ಲೋಕೇಶ್ವರಿ ನೀನೇ ರಕ್ಷಿಸ ಬೇಕಮ್ಮ||
ರಾಗ: ರಂಜನಿ
||ಚರಣ 3||
ಅಂಜನ ಲೋಚನಿ ಅಂಬಿಕೆ ಶಿವೆಯೇ||
ಕುಂಜರ ಮುಖ ಮಾತೆ ಮಂಗಳ ದಾತೇ||
ಅಂಜುತ ಬಂದಿಹೆ ಆಶೆಯ ಬಯಸಿ||
ರಂಜನಿ ಎನ್ನ ರಕ್ಷಿಸ ಬೇಕಮ್ಮ||
Raga: Anandabhairavi
||Pallavi||
Parashiva sathi ninna padava nambide||
Karunadi kapadamma devi||
||Anupallavi||
Yenidu ee mouna deenala poreyalu||
Ariyada naa ninna yenendu pogalalamma||
Raga: Kalyani
||Charana 1||
Yella durithagalu girigalanthiddaru||
Hullaguvudu ninna kannotave||
Kalyaniye karunaa sagariye shiveye||
Ullasiye ume ninna nambide namma||
Raga: Bhageshri
||Charana 2||
Nageshwari yendu namisuve thaye||
Bhageshwari thaye bandindu krupe thoru||
Bhageshwari thaye parvathiye amma||
Lokeshwari nine rakshisa bekamma||
Raga: Ranjani
||Charana 3||
Anjana lochani ambike shiveye||
Kunjara mukha mathe mangala dathe||
Anjutha bandihe aasheya bayasi||
Ranjani yenna rakshisa bekamma||