Raga: Naata
Tala: Khandachapu
Composer: Purandara Dasa


||ಪಲ್ಲವಿ||
ವಂದಿಸುವುದಾದಿಯಲಿ ಗಣನಾಥನ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟು||

||ಚರಣ 1||
ಹಿಂದೆ ರಾವಣನು ತಾನು ವಂದಿಸದೆ ಗಜಮುಖನ||
ಸಿಂಧು ತಪವನುಗೈದು ವಾರಪಡೆಯಲು||
ಒಂದು ನಿಮಿಷದು ಬಂದು ವಿಗ್ನವನು ಆಚರಿಸೆ||
ತಂದ ವರಗಳನೆಲ್ಲ ಧರೆಗೆ ಇಳಿಸಿದನು||

||ಚರಣ 2||
ಅಂದಿನ ಬಗೆಯರಿತು ಬಂದು ಹರಿ ಧರ್ಮಜಗೆ||
ಮುಂದೆ ಗಣಪನ ಪೂಜಿಸಿದೆಂದು ಪೇಳಿ||
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ||
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನ್ನು||

||ಚರಣ 3||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು||
ಚೆಂದದಿಂದಲಿ ಸಕಲ ಸಿದ್ದಿಗಳನಿತ್ತು||
ತಂದೆ ಸಿರಿಪುರಂದರ ವಿಠ್ಠಲನ ಸೇವೆಯೊಳು||
ಚಂದ ವಿಘ್ನವ ಕಳೆದು ಆನಂದವನು ಕೊಡುವ||


||Pallavi||
Vandisuvudadiyali Gananathana||
Sandeha salla shree hariyaajne idakuntu||

||Charana 1||
Hinde ravananu thanu vandisade gajamukhana||
Sindhu thapavanugaidu varapadeyalu||
Ondu nimishadu bandu vignavanu aacharise||
Thanda varagalanella dharege ilisidanu||

||Charana 2||
Andina bageyarithu bandu hari dharmajage||
Munde ganapana pujisidendu peli||
Onde manadali bandu pujisalu gananaatha||
Hondisida nirvighnadinda rajyavanu||

||Charana 3||
Indu jagavella umenandanana pujisalu||
Chendadindali sakala siddigalanithu||
Thande siripurandara vittalana seveyolu||
Chanda vighnava kaledu anandavanu koduva||


 

Advertisements